ಈ ದೇವಾಲಯವು ಸುಮಾರು 2500 ವರ್ಷಗಳಿಗಿಂತ ಹೆಚ್ಚು ಹಳೆಯದು ಎಂದು ಹೇಳಲಾಗುತ್ತದೆ. ಈ ಪ್ರದೇಶವು 'ಪುಣ್ಯಕ್ಷೇತ್ರ' ಅಥವಾ ಪವಿತ್ರ ಪ್ರದೇಶವೆಂದು ಹೇಳಲಾಗುತ್ತದೆ. ಇಲ್ಲಿ ಗೌತಮ ಮಹರ್ಷಿಯು ಸಾಲಿಗ್ರಾಮವನ್ನು ಪೂಜಿಸಿದ್ದರು. ಅನೇಕ ವರ್ಷಗಳ ನಂತರ, ದಂತಕಥೆಯ ಪ್ರಕಾರ, ರಾಜ 3ನೇ ವೀರ ಬಲ್ಲಾಳ ಈ ಕಾಡಿನಲ್ಲಿ ಬೇಟೆಯಾಡುವ ಸಮಯದಲ್ಲಿ ಒಂದು ಬಾರಿ ಕಳೆದುಹೊದನು. ಅವನು ಒಂದು ದೊಡ್ಡ ಮರದ ನೆರಳಿನ ಕೆಳಗೆ ವಿಶ್ರಮಿಸುತ್ತಿದ್ದಾಗ ಮೊಲವನ್ನು ಬೆನ್ನಟ್ಟುವ ಬೇಟೆಯ ನಾಯಿಯನ್ನು ನೋಡಿದನು. ನಂತರ ಅವನು ಒಂದು ನಿರ್ದಿಷ್ಟ ಸ್ಥಳವನ್ನು ತಲುಪಿದಾಗ, ಮೊಲವು ಹಿಂತಿರುಗಿ ಉಗ್ರ ನಾಯಿಯನ್ನು ಬೆನ್ನಟ್ಟಲು ಆರಂಭಿಸಿತು. ಈ ಘಟನೆಗಳ ವಿಚಿತ್ರ ತಿರುವುವನ್ನು ಗಮನಿಸಿದಾಗ, ಆ ಸ್ಥಳದಲ್ಲಿ ಕಾಣದ ಕೆಲವು ಶಕ್ತಿಗಳನ್ನು ಅರಸನು ಮನಗಂಡನು. ಅವನು ಇಡೀ ಪ್ರದೇಶವನ್ನು ಅಗೆದು ಮತ್ತು ಭೂಮಿಯ ಪದರಗಳ ಅಡಿಯಲ್ಲಿ ಮರೆಯಾಗಿದ್ದ ಪ್ರಳಯ ವರಹನಾಥಸ್ವಾಮಿಯ ವಿಗ್ರಹವನ್ನು ಕಂಡುಕೊಂಡನು. ರಾಜನು ಅದನ್ನು ದೇವಸ್ಥಾನದಲ್ಲಿ ಸ್ಥಾಪಿಸಿ, ನಿಯಮಿತವಾದ ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಸಿದನು. ನಾವು ಇಂದು ನೋಡುತ್ತಿರುವ ದೇವಾಲಯವು ರಾಜನು ಕಟ್ಟಿದ ಅವಶೇಷಗಳು. ಇಂದಿಗೂ ಸಹ ದೇವಸ್ಥಾನದ ಮುಂದೆ ಮತ್ತು ದೇವಸ್ಥಾನದ ಮೇಲೆ ಶಾಸನಗಳಿದ್ದು, ಈ ಸ್ಥಳದ ಕಥೆಯನ್ನು ನಮಗೆ ಹೇಳುತ್ತದೆ.