ಶ್ರೀ ಭೂವರಾಹ ಜಯಂತಿ 3.05.2019 ರಂದು ಆಚರಿಸಲಾಗುತ್ತದೆ

ಶ್ರೀ ಭೂವರಾಹನಾಥ ಸ್ವಾಮಿ ದೇವಸ್ಥಾನಕ್ಕೆ ಸುಸ್ವಾಗತ

ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ವರಾಹನಾಥಕಲ್ಲಹಳ್ಳಿಯಲ್ಲಿ ಲಕ್ಷ್ಮೀ ಸಮೇತನಾದ ಭೂವರಾಹನಾಥಸ್ವಾಮಿಗೆ ಅಭಿಷೇಕ ವಿಶೇಷ ಪೂಜೆ...ಹರಕೆ ಹೊತ್ತು ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಇಷ್ಠಾರ್ಥಗಳನ್ನು ಕರುಣಿಸಿ ಆಶೀರ್ವಧಿಸುತ್ತಿರುವ. ಭೂವರಾಹಸ್ವಾಮಿ....ಹಾಲು, ಮೊಸರು, ಎಳನೀರು, ಜೇನುತುಪ್ಪ, ಕಬ್ಬಿನಹಾಲು, ಗಂಗಾಜಲ, ಶ್ರೀಗಂಧ, ಅರಿಶಿನ ಕುಂಕುಮ ಸೇರಿದಂತೆ 25 ವಿವಿಧ ಬಗೆಯ ಹೂವುಗಳಿಂದ ಸ್ವಾಮಿಗೆ ವಿಶೇಷ ಅಭಿಷೇಕ...ಸಾವಿರಾರು ಭಕ್ತರಿಂದ ಅಭಿಷೇಕದ ವೀಕ್ಷಣೆ...14ಅಡಿ ಎತ್ತರದ ಭೂವರಾಹನಾಥಸ್ವಾಮಿಯ ಕೃಷ್ಣಶಿಲಾ ವಿಗ್ರಹ ಇಡೀ ದೇಶದಲ್ಲಿಯೇ ಅಪರೂಪದ್ದಾಗಿದೆ...ಮೈಸೂರಿನ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠದ ಉಸ್ತುವಾರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಶ್ರೀ ಕ್ಷೇತ್ರ...ದೇವಸ್ಥಾನದ ಪಕ್ಕದಲ್ಲಿಯೇ ಪಶ್ಚಿಮಾಭಿಮುಖವಾಗಿ ಹರಿಯುತ್ತಿರುವ ಹೇಮಾವತಿ ನದಿಯಲ್ಲಿ ಪ್ರವಾಸಿಗರು ಮತ್ತು ಭಕ್ತಾಧಿಗಳಿಗೆ ದೋಣಿ ವಿಹಾರ, ತೆಪ್ಪದಲ್ಲಿ ದೋಣಿವಿಹಾರ, ದಾಸೋಹ ಭವನದಲ್ಲಿ ಭಕ್ತಾಧಿಗಳಿಗೆ ಉಚಿತ ದಾಸೋಹ ಪ್ರಸಾದದ ವಿತರಣೆ...ಪರಕಾಲ ಮಠದ ಆಡಳಿತಾಧಿಕಾರಿ ಶ್ರೀನಿವಾಸ ರಾಘವನ್ ಅವರಿಂದ ಅಭಿಷೇಕ ಹಾಗೂ ಪೂಜಾ ಕಾರ್ಯಕ್ರಮದ ನೇತೃತ್ವ...ವೇದಬ್ರಹ್ಮ ನಾಗೇಶರಾವ್‌ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ...

ಪ್ರಸಾದ ಸಮಯ : ಬೆಳಿಗ್ಗೆ 9:00 ರಿಂದ ಸಂಜೆ 7:00 ರವರಗೆ

ಮಾರ್ಗ ನಕ್ಷೆ

ಹಾಸನದಿಂದ ಕಲ್ಲಹಳ್ಳಿಗೆ

  • ಕಿಮೀ 87 ಕಿಮೀ
  • ಸಮಯ 50 ನಿಮಿಷಗಳು

ಕೆ ಆರ್ ಪೇಟೆಯಿಂದ ಕಲ್ಲಹಳ್ಳಿಗೆ

  • ಕಿಮೀ 20 ಕಿಮೀ
  • ಸಮಯ 39 ನಿಮಿಷಗಳು
>